ತಿಮ್ಮಪ್ಪದಾಸರು ಚಿಕ್ಕಂದಿನಿಂದಲೇ ರಾಮಾಯಣ, ಮಹಾಭಾರತ, ಭಾಗವತ, ಪುರಾಣಗಳ ಆಳವಾದ ಅಧ್ಯಯನವನ್ನು ಮಾಡಿದರು. ಮನೆಯ ವಾತಾವರಣವೂ ಅದಕ್ಕೆ ಪೂರಕವಾಗಿಯೇ ಇದ್ದಿತು. ವೇದೋಪನಿಷತ್ತುಗಳು ಮನೆಯ ಹಿರಿಯರಿಗೆ ಕರತಲಾಮಲಕವಾಗಿದ್ದವು. ತಿಮ್ಮಪ್ಪದಾಸರಿಗೆ ಹದಿನೆ೦ಟು ವರ್ಷ ತುಂಬುವುದರೊಳಗೆ ಅವರ ತಂದೆಯವರು ತೀರಿಕೊ೦ಡರು. ಮನೆಯ ಜವಾಬ್ದಾರಿಗಳು ಇವರ ಹೆಗಲೇರಿದವು. ಕೇವಲ ಜಮೀನಿನ. ವರಮಾನದಿಂದ ಜೀವನ ನಡೆಸುವುದು ಕಷ್ಟವಾದಾಗ ಪಕ್ಕದ ದೊಡ್ಡ ಪಟ್ಟಣವಾದ ಅರಸಿಕೆರೆಗೆ ತಮ್ಮ ವಾಸ್ತವ್ಯವನ್ನು ಬದಲಾಯಿಸಬೇಕಾಯಿತು.
ತಿಮ್ಮಪ್ಪದಾಸರ ಪತ್ನಿ ಸುಬ್ಬಲಕ್ಷಮ್ಮನವರೂ ಮಹಾಸಾದ್ದಿ. ಸುಸಂಸ್ಕೃತ ಕುಟುಂಬದ ಹೆಣ್ಣುಮಗಳು. ಈ ದಂಪತಿಗಳಗೆ ಆರು ಗಂಡು, ಐದು ಹೆಣ್ಣು - ಒಟ್ಟು ಹನ್ನೊಂದು ಮಕ್ಕಳು. ಜೀವನ ನಿರ್ವಹಣೆಗೆ ತಿಮ್ಮಪ್ಪದಾಸರು ಹತ್ತು ಹಲವು ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಯಿತು. ಶ್ಯಾನುಭೋಗಿಕೆಯ ಲೆಕ್ಕಪತ್ರಗಳಲ್ಲದೆ, ಕಂಟ್ರಾಕ್ಟರ್ ಒಬ್ಬರ ದಿನನಿತ್ಯದ ಲೆಕ್ಕಗಳನ್ನು ನಿರ್ವಹಿಸಿದರು. ಜೊತೆಗೆ ರಸ್ತೆಯ ಪ್ಲಾನ್ ಮಾಡುವುದು, ಆ ಕೆಲಸದ ಉಸ್ತುವಾರಿಯನ್ನು ನೋಡಿಕೊಳ್ಳುವುದನ್ನು ಸಹಾ ಮಾಡಿದರು. ಬಾಣಾವರದ ಸಮೀಪದಲ್ಲಿ ರಸ್ತೆಯ ಕೆಲಸ ಸಾಗುವಾಗ ಅಲ್ಲಿ ಪರಿಚಯವಾದ ರಾಮಣ್ಣಾರ್ಯರ ಮನೆಯಲ್ಲಿ ಉಳಿಯುತ್ತಿದ್ದರು. ರಾಮಣ್ಣಾರ್ಯರು ಸಂಗೀತಗಾರರು ಹಾಗೂ ಸಂಗೀತ ಶಾಸ್ತ್ರದ ವಿದ್ವಾಂಸರಾಗಿದ್ದವರು. ತಿಮ್ಮಪ್ಪದಾಸರ ಕ೦ಠ ಸಿರಿ, ಭಜನೆ, ಶ್ಲೋಕ ಇತ್ಯಾದಿಗಳನ್ನು ಅರ್ಥೈಸುವ ಪರಿ. ಕಂಡ ರಾಮಣ್ಣಾರ್ಯರು ಇವರನ್ನು ತಮ್ಮ ಶಿಷ್ಯನನ್ನಾಗಿ ಸ್ಹೀಕರಿಸಿದರು. ತಮಗೆ ತಿಳಿದದ್ದನ್ನೆಲ್ಲಾ ಶಿಷ್ಯನಿಗೆ. ಧಾರೆಯೆರೆಯುವುದರ ಜೊತೆಗೆ, ಸಂಗೀತ ಶಾಸ್ತ್ರಕ್ಕೆ ಸ೦ಬ೦ಧಿಸಿದ. ತಮ್ಮಲ್ಲಿದ್ದ ಗ್ರಂಥ ಭಂಡಾರವನ್ನು ಇವರಿಗೆ ಇತ್ತು ಕಣ್ಮುಚ್ಚಿದರು.
ತಿಮ್ಮಪ್ಪದಾಸರ ಬದುಕಿನಲ್ಲಿ ಇದೊ೦ದು ದೊಡ್ಡ ತಿರುವು. ಮುಂದೆ ಅವರ ಗಮನವೆಲ್ಲ ಸಂಗೀತದ ಕಡೆಗೆ ತಿರುಗಿತು. ಹಿರಿಯ ಮಗ ಸಂಸಾರದ ಜವಾಬ್ದಾರಿ ವಹಿಸಿಕೊಂಡಿದ್ದು ಇವರಿಗೆ ಅನುಕೂಲವೂ ಆಯಿತು. ತಮ್ಮ ಮಕ್ಕಳಿಗೂ ವಿವಿಧ ವಾದ್ಯಗಳಲ್ಲಿ ಮತ್ತು ಹಾಡುಗಾರಿಕೆಯಲ್ಲಿ ತರಬೇತಿ ಕೊಡಿಸಿದರು. ಇವರ ಮನೆಯೇ ಭಜನಾ ಮಂದಿರವಾಯಿತು. ವಿಶೇಷ ದಿನಗಳಲ್ಲಿ ಸುತ್ತಮುತ್ತಅನ ಅಸ೦ಖ್ಯ ಜನರು ಇವರ ಮನೆಯಲ್ಲಿ ನೆರೆದು ಇವರ ಸಂಗೀತ, ಆಧ್ಯಾತ್ಮ ಪ್ರವಚನಗಳಗೆ ಕಿವಿಯಾದರು. ತಿಮ್ಮಪ್ಪದಾಸರು ಹೆಚ್ಚುಹೆಚ್ಚಾಗಿ ಅಧ್ಯಯನ, ಹರಿಕಥೆ, ಪುರಾಣ ಪಠಣಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮುಂದೆ ' ಸಾಹಿತ್ಯ ರಚನೆಯಲ್ಲಿಯೂ ಕೃಷಿ ಮಾಡುತ್ತಾ ಕೀರ್ತನೆಗಳು, ದೇವರನಾಮಗಳಲ್ಲದೆ, ಹರಿಕಥೆಗಳನ್ನೂ ರಚಿಸಿದರು. ಮು೦ದೆ ಇವರ ಮನೆಯೇ "ಭಾಗವತ ಕುಟೀರ”ವಾಯಿತು. ಎಲ್ಲೆಡೆಯಿ೦ದ ವಿದ್ದಾಂಸರು ಇವರನ್ನು ಹುಡುಕಿಕೊಂಡು ಬರುತ್ತಿದ್ದರು. ಇವರ ಖ್ಯಾತಿ ಮಠಮಾನ್ಯಗಳಗೂ ತಲುಪಿ ಉಡುಪಿ ಮತ್ತು ಶೃಂಗೇರಿಯ ಗುರುವರ್ಯರು ಇವರನ್ನು ತಮ್ಮಲ್ಲಿಗೆ ಕರೆಸಿಕೊಂಡು ಕ್ರಮವಾಗಿ 'ಶ್ರೀಕೃಷ್ಣ ಲೀಲಾಮ್ಭತ ಕಥಾಭಾಗ” ಮತ್ತು "ಶಂಕರ ವಿಜಯ'ವನ್ನು ವಾರ ಕಾಲ ನಡೆಸಿಕೊಡಲು ಅವಕಾಶ ಕೊಟ್ಟು, ಸನ್ಮಾನಿಸಿದರು. ಸಂಸ್ಕೃತ ಗ್ರಾಮಗಳಾದ ಮತ್ತೂರು-ಹೊಸಳ್ಳಿಗಳಗೆ ಭೇಟಕೊಟ್ಟ ಸಂದರ್ಭದಲ್ಲಿ ಸಂಸ್ಕೃತದಲ್ಲಿಯೇ "ಆಧ್ಯಾತ್ಮ ರಾಮಾಯಣ"ವನ್ನು ಬರೆದು ಅಲ್ಲಿನ ಸಂಸ್ಕೃತ ವಿದ್ದಾಂಸರನ್ನೂ ಬೆರಗುಗೊಳಿಸಿ ಸನ್ಮಾನಿತರಾದವರು ತಿಮ್ಮಪ್ಪದಾಸರು.
ನಾಟಕದ ಪಿತಾಮಹ ಎನ್ನಿಸಿದ ವರದಾಚಾರ್ಯರು ಅರಸಿಕೆರೆಯಲ್ಲಿ ಮೊಕ್ಕಾಂ ಹಾಕಿ 'ಭಕ್ತ ಪ್ರಹ್ಲಾದ” ನಾಟಕವನ್ನು ಅಭ್ಯಾಸ ಮಾಡುತ್ತಿದ್ದಾಗ ಆ ನಾಟಕದಲ್ಲಿನ ತಪ್ಪುಗಳನ್ನು ಗಮನಿಸಿದ ತಿಮ್ಮಪ್ಪದಾಸರು, ಮಾತುಗಳು ಮತ್ತು ಹಾಡುಗಳ ಸಹಿತ ಹೊಸದಾಗಿ "ಭಕ್ತ ಪ್ರಹ್ಲಾದ” ನಾಟಕವನ್ನೇ ಬರೆದುಕೊಟ್ಟರು. ತಮ್ಮ ಮಗ ರಾಮಣ್ಣನ ಕೈಲೇ ಪ್ರಹ್ಲಾದನ ಪಾತ್ರವನ್ನೂ ಮಾಡಿಸಿದ್ದರು. ವರದಾಚಾರ್ಯರು ತಿಮ್ಮಪ್ಪದಾಸರ ಪ್ರತಿಭೆಗೆ ಮಾರುಹೋಗಿದ್ದರು. ತಮ್ಮ ಊರಿನಲ್ಲಿಯೇ ನಾಟಕ ಕ೦ಪನಿಯೊ೦ದನ್ನು ಶುರು ಮಾಡಿದ್ದ ತಿಮ್ಮಪ್ಪದಾಸರಿಗೆ ಕಾರಣಾ೦ತರಗಳಿ೦ದ ಅದನ್ನು ಮುಂದುವರೆಸಲು ಆಗದೆ, ಮುಚ್ಚಬೇಕಾಗಿ ಬಂದಿತು. ಚಿತ್ರಕಲೆ ಹಾಗೂ ಶಿಲ್ಪಕಲೆಯಲ್ಲೂ ತಿಮ್ಮಪ್ಪದಾಸರು ಕೈಯಾಡಿಸಿದ್ದರೆ೦ಬುದು ಅವರ ಬಹುಮುಖ ಪ್ರತಿಭೆಗೆ ಸಾಕ್ಷಿ.
ತಿಮ್ಮಪ್ಪದಾಸರು ಮಕ್ಕಳಿಗಾಗಿ "ಭಕ್ತ ಪ್ರಹ್ಲಾದ, ಚ೦ದ್ರಹಾಸ, ಹರಿಶ್ಚಂದ್ರ, ಶ್ರೀಕೃಷ್ಣ ಬಾಲಲೀಲೆ, ಗೋಕುಲ ನಿರ್ಗಮನ" ಮುಂತಾದ ನೀತಿಪ್ರಧಾನವಾದ ಹರಿಕಥೆಗಳನ್ನು ಬರೆದಿದ್ದರು. "ಆಧ್ಯಾತ್ಮ ರಾಮಾಯಣ" ಮತ್ತು "ಶಶಿರೇಖಾ ಪರಿಣಯ” ಎ೦ಬ ಎರಡು ಗ್ರ೦ಥಗಳನ್ನು ಕೂಡಾ ಬರೆದಿದ್ದಾರೆ. ತಿಮ್ಮಪ್ಪದಾಸರು ರಚಿಸಿದ ಹಾಡುಗಳಲ್ಲಿ ದೇವರನಾಮಗಳಲ್ಲದೆ ಆರತಿ ಹಾಡುಗಳು, ಲಾಲಿ ಪದಗಳು, ಬೀಗರ ಹಾಡುಗಳು, ಹಸೆಮಣೆಗೆ ಕರೆಯುವ ಹಾಡುಗಳು ಇತ್ಯಾದಿ ಇದ್ದವು. ಆದರೆ ಅವರ ಸಾಹಿತ್ಯದ ಬಹುಭಾಗ ಲಭ್ಯವಿಲ್ಲ ಎಂಬುದು ದುರ್ದೈವದ ಸಂಗತಿ. ಶ್ರೀಯುತ ಶ್ರೀನಿವಾಸ್ ಅವರು ಕಷ್ಟಪಟ್ಟು ಸಂಗ್ರಹಿಸಿದ ಒಂದಷ್ಟು ಹಾಡುಗಳು ಇ೦ದು ನಮ್ಮ ನಡುವೆ ಇವೆ ಎಂಬುದೇ ಪುಣ್ಯ.
ತುಂಬು ಜೀವನ ನಡೆಸಿದ ತಿಮ್ಮಪ್ಪದಾಸರು ತಮ್ಮ ತೊಂಭತ್ತೆರಡನೆಯ ವಯಸ್ಸಿನಲ್ಲಿ ದೇವರನ್ನು ಸ್ಮರಿಸುತ್ತಲೇ ಇಹಲೋಕ ತ್ಯಾಗ ಮಾಡಿದರು. ಸಾಹಿತ್ಯ ಸಂಗೀತ ಲೋಕದಲ್ಲೊಂದು ನಿರ್ವಾತ ಉಂಟಾಯಿತು. ತಿಮ್ಮಪ್ಪದಾಸರು ಆಗ ಸ್ಥಾಪಿಸಿದ "ಶ್ರೀ ರಾಮ ಸೇವಾ ಸಂಘ" ಮುಂದುವರೆಯುತ್ತಾ ಬ೦ದು, ಇಂದು ಶ್ರೀ ರಾಮ ದೇವಸ್ಥಾನ, ಕಲ್ಯಾಣಮ೦ಟಪ ಇತ್ಯಾದಿಗಳನ್ನು ಹೊ೦ದಿದ್ದು ಅರಸಿಕೆರೆಯ ಹೆಮ್ಮೆಯ ಸಂಸ್ಥೆಯಾಗಿ ಉಳಿದುಬಂದಿದೆ.
Related photos